ಕೆ.ಎಲ್.ಇ. ಸಂಸ್ಥೆಯ ಎಮ್.ಎಸ್.ಶೇಷಾದ್ರಿ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯವು ೧೯೬೩ರಲ್ಲಿ ಸ್ಥಾಪಿತವಾಗಿದ್ದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ದಿಂದ ಮಾನ್ಯತೆ ಹೊಂದಿದೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ನವದೆಹಲಿ)ಯು ಮಾನ್ಯತೆ ನೀಡಿದೆ .ಅದರಂತೆ ರಾಷ್ಟ್ರೀಯ ಮಾನ್ಯತಾ ಮಂಡಳಿಯು ಕೊಡ ಮಾನ್ಯತೆ ನೀಡಿದೆ. == ವಿಭಾಗಗಳು == ಸಿವಿಲ್ ಎಂಜಿನಿಯರಿಂಗ್ ಗಣಕಯಂತ್ರ ವಿಜ್ಞಾನ ಎಂಜಿನಿಯರಿಂಗ್ ಮಾಹಿತಿ ತಂತ್ರಜ್ಞಾನ ಎಂಜಿನಿಯರಿಂಗ್ ವಿದ್ಯುನ್ಮಾನ ಮತ್ತು ಸಂವಹನ ಎಂಜಿನಿಯರಿಂಗ್ ಯಾಂತ್ರಿಕ ಎಂಜಿನಿಯರಿಂಗ್ == ಆವರಣ == ಮಹಾವಿದ್ಯಾಲಯವು ೫೦ ಎಕರೆ ವಿಶಾಲವಾದ ಆವರಣ ಹೊಂದಿದೆ. ಆವರಣದಲ್ಲಿ ಕ್ರಿಕೇಟ್, ಟೆನ್ನಿಸ್, ಕಾಲ್ಚಂಡು, ಒಳಾಂಗಣ ಮೈದಾನ ಇದೆ. == ಗ್ರಂಥಾಲಯ == ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರವು ಅತ್ಯುನ್ನತ ಡಿಜಿಟಲ್ ಗ್ರಂಥಾಲಯ ಮತ್ತು ಸಾವಿರಾರು ಎಲ್ಲ ವಿಭಾಗದ ಪುಸ್ತಕಗಳನ್ನು ಹೊಂದಿದೆ. ವೈಜ್ಞಾನಿಕ ಹಾಗೂ ತಾಂತ್ರಿಕ ದೈನಿಕ, ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳು ಉಂಟು. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ನಿಯತಕಾಲಿಕಗಳು ಸಿಗುತ್ತವೆ. == ಪ್ರವೇಶ == ದ್ವಿತೀಯ ಪಿಯುಸಿ (೧೦+೨) ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪ್ರವೇಶವಿದೆ. ಡಿಪ್ಲೊಮಾ ,ಜಿಟಿಟಿಸಿ, ಸಿಬಿಎಸ್ಸಿ (೧೦+೨) ಮತ್ತು ಐಸಿಎಸ್ಸಿ (೧೦+೨) ವಿದ್ಯಾರ್ಥಿಗಳಿಗೂ ಪ್ರವೇಶವಿದೆ. == ವಿದ್ಯಾರ್ಥಿವೇತನ == ಅರ್ಹತೆ ವಿದ್ಯಾರ್ಥಿವೇತನ ರಕ್ಷಣಾ ವಿದ್ಯಾರ್ಥಿವೇತನ ಎಸ್.ಸಿ/ಎಸ್.ಟಿ ವಿದ್ಯಾರ್ಥಿವೇತನ == ಜೀವನ ಮಾರ್ಗದರ್ಶನ ಕೇಂದ್ರ == ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕಂಪನಿಗಳು ಕ್ಯಾಂಪಸ್ ಸಂದರ್ಶನ ನಡುಸುತ್ತವೆ. == ಬಾಹ್ಯ ಸಂಪರ್ಕಗಳು == ಕೆ.ಎಲ್.ಇ. ತಾಂತ್ರಿಕ ಮಹಾವಿದ್ಯಾಲಯ, ಬೆಳಗಾವಿಯ ಅಧಿಕೃತ ಅಂತರಜಾಲ ತಾಣ